ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್ (1932-2019) ಭಾರತದ ಮಾಜಿ ಚುನಾವಣಾ ಆಯುಕ್ತರು (1990-96). == ಜೀವನ == 1932ರಲ್ಲಿ ಕೇರಳದ ಪಾಲ್ಘಾಟ್‍ನಲ್ಲಿ ಜನಿಸಿದರು. ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತಕ್ಕೆ ಮರಳಿದ ಇವರು ಐ.ಎ.ಎಸ್. ಅಧಿಕಾರಿಯಾಗಿ ಸೇವೆ ಆರಂಭಿಸಿದರು. == ಚುನಾವಣಾ ವ್ಯವಸ್ಥೆಯ ಸುಧಾರಣೆ == ಇವರು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲೇ ದೇಶದ ಚುನಾವಣಾ ವ್ಯವಸ್ಥೆಯನ್ನು ವಿಶ್ಲೇಷಿಸಿ, ಅದರಲ್ಲಿದ್ದ ನೂರಾರು ದೋಷಗಳನ್ನು ಗುರುತಿಸಿದರು. ಇವುಗಳ ನಿವಾರಣೆಗೆ ಶಾಸನಾತ್ಮಕ ಸುಧಾರಣೆಗಳನ್ನು ತರಲು ಖಚಿತವಾಗಿ ಪ್ರಯತ್ನಿಸಿದರು. ಚುನಾವಣಾ ಆಯೋಗಕ್ಕಿರುವ ಸಂವಿಧಾನದತ್ತ ಅಧಿಕಾರವನ್ನು ಬಳಸಿ ಚುನಾವಣಾ ಸಮಸ್ಯೆಗಳನ್ನು ಹಂತಹಂತವಾಗಿ ತೊಡೆದು ಹಾಕತೊಡಗಿದರು. == ಪ್ರಶಸ್ತಿ, ನನ್ಮಾನಗಳು == ಇವರು ಸಲ್ಲಿಸಿದ ಸೇವೆಗಾಗಿ ರ್ಯಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ (1996). == ಇತರ ಮಾಹಿತಿ == ಅವರು ಮೈ ಬರ್ಡ್‍ನ್ಡ್ ಹಾರ್ಟ್ ಎಂಬ ಅನುಭವ ಕಥನವನ್ನು ಬರೆದಿದ್ದಾರೆ. == ನಿಧನ == ೧೦ ನವೆಂಬರ್ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು. == ಉಲ್ಲೇಖಗಳು ==